ಮಾರ್ಗಸೂಚಿಗಳು

✤ ಸರ್ಕಾರದ ಆದೇಶ ಸಂಖ್ಯೆ:ವಇ:87:ಹೆಚ್ಎಫ್ಎ:2021, ಬೆಂಗಳೂರು, ದಿನಾಂಕ:26.04.2022 ರ ಆದೇಶದನ್ವಯ ಆಯಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಸ್ಥಳೀಯರಿಗೆ ಆಯಾ ವಿಧಾನಸಭಾ ಕ್ಷೇತ್ರದ “ನಗರ ಆಶ್ರಯ ಸಮಿತಿ” ಮೂಲಕ ಯೋಜನೆಯ ಮಾನದಂಡಗಳನುಸಾರ ಆಯ್ಕೆ ಮಾಡಿ ಲಾಟರಿ ಮುಖಾಂತರ ಮನೆ/ಫ್ಲಾಟ್ಗಳನ್ನು ಪ್ರತಿ ಬ್ಲಾಕ್/ ಟವರ್ಗಳಲ್ಲಿ ಲಂಬಾಕಾರವಾಗಿ (Vertically) ಹಂಚಿಕೆ ಮಾಡಲಾಗುವುದು. ಆದ್ದರಿಂದ ಅರ್ಹ ಅರ್ಜಿದಾರರು ಆಯಾ ವಿಧಾನಸಭಾ ಕ್ಷೇತ್ರದಲ್ಲಿ “ಸ್ಥಳೀಯ” ಮೀಸಲಾತಿಯಡಿ ಮನೆ/ಫ್ಲಾಟ್ಗಳನ್ನು ಪಡೆಯಲು ಇಚ್ಚಿಸಿದಲ್ಲಿ, ಆಯಾ ವಿಧಾನಸಭಾ ಕ್ಷೇತ್ರದ “ನಗರ ಆಶ್ರಯ ಸಮಿತಿ”ಗೆ ಯೋಜನೆಯ ಮಾನದಂಡಗಳನುಸಾರ ಅರ್ಜಿಗಳನ್ನು ಸಲ್ಲಿಸಿ ಮನೆ/ಫ್ಲಾಟ್ಗಳನ್ನು ಪಡೆಯಬಹುದಾಗಿದೆ.
✤ ಈಗಾಗಲೇ “ಸ್ಥಳೀಯ ಮೀಸಲಾತಿಯಡಿ” ಆನ್ಲೈನ್ ನಲ್ಲಿ ಮನೆ/ಫ್ಲಾಟ್ಗಳನ್ನು ಪಡೆಯಲು ಅರ್ಜಿ ಸಲ್ಲಿಸಿರುವ ಅರ್ಹ ಫಲಾನುಭವಿಗಳ ಪಟ್ಟಿಯನ್ನು “ನಗರ ಆಶ್ರಯ ಸಮಿತಿ”ಗೆ ಸಲ್ಲಿಸಲಾಗುವುದು.
✤ ಈಗಾಗಲೇ “ಸ್ಥಳೀಯ ಮೀಸಲಾತಿಯಡಿ” ಆನ್ಲೈನ್ ನಲ್ಲಿ ಮನೆ/ಫ್ಲಾಟ್ಗಳನ್ನು ಪಡೆಯಲು ಅರ್ಜಿ ಸಲ್ಲಿಸಿ, ಆರಂಭಿಕ ಠೇವಣಿ ರೂ.1.00 ಲಕ್ಷಗಳನ್ನು ಪಾವತಿಸಿ ಮನೆ/ಫ್ಲಾಟ್ಗಳನ್ನು ಆನ್ಲೈನ್ ಮುಖಾಂತರ ಆಯ್ಕೆ ಮಾಡಿಕೊಳ್ಳದಿರುವ ಅರ್ಹ ಫಲಾನುಭವಿಗಳ ಪಟ್ಟಿಯನ್ನು ಸಹಾ “ನಗರ ಆಶ್ರಯ ಸಮಿತಿ”ಗೆ ಸಲ್ಲಿಸಲಾಗುವುದು. ಸದರಿಯವರಿಗೆ ಸಮಿತಿಯ ಮುಖಾಂತರ ಲಾಟರಿ ಮೂಲಕ ಮನೆ/ಫ್ಲಾಟ್ಗಳನ್ನು ಹಂಚಿಕೆ ಮಾಡಲಾಗುವುದು.
✤ ಮಾಹಿತಿಗಾಗಿ ಸಂಪರ್ಕಿಸಿ:
ವಿಧಾನಸಭಾ ಕ್ಷೇತ್ರದ ಹೆಸರು ಮೊಬೈಲ್ ಸಂಖ್ಯೆ
ಯಲಹಂಕ & ದಾಸರಹಳ್ಳಿ 9845015018 , 9740687778
ಯಶವಂತಪುರ 9448287514 , 7975956234 , 9164239699 , 8088253773
ಆನೇಕಲ್ & ಬೆಂಗಳೂರು ದಕ್ಷಿಣ 9448287514 , 9606138200 , 9448277072
ಮಹದೇವಪುರ , ಕೆ ಆರ್ ಪುರ & ಬ್ಯಾಟರಾಯನಪುರ 9448021564 , 8660807796 , 9448287367